7 ಕೃಷಿ ಪತ್ತು, ಸಹಕಾರ ಸಿಂಧು

ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ಕೃಷಿ ಪತ್ತು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಕರಿಬಸಪ್ಪ , ಸ. ಸಂ. ಅಪರ ನಿಬಂಧಕರು (ಪತ್ತು )
ದೂರವಾಣಿ ಸಂಖ್ಯೆ : 080-22256146
ಇ-ಮೇಲ್ : addlrcs-credit-ka@nic.in

ಅಬ್ದುಲ್ ಬಾರಿ , ಸ. ಸಂ. ಸಹಾಯಕ ನಿಬಂಧಕರು
(ಪತ್ತು-1
)
ದೂರವಾಣಿ ಸಂಖ್ಯೆ :080-22269636/37 Ext : 215 ,
ಇ-ಮೇಲ್ : arcs-credit-ka@nic.in

ವೆಂಕಟಾಚಲಯ್ಯ , ಸ. ಸಂ. ಸಹಾಯಕ ನಿಬಂಧಕರು    (ಪತ್ತು-2 )
ದೂರವಾಣಿ ಸಂಖ್ಯೆ :080-22269636/37 Ext : 215
ಇ-ಮೇಲ್ : arcs-credit-ka@nic.in

ಸಿದ್ಧ ಗಂಗಪ್ಪ , ಸ. ಸಂ. ಸಹಾಯಕ ನಿಬಂಧಕರು (ಎಲ್.ಡಿ.ಬಿ ) ದೂರವಾಣಿ ಸಂಖ್ಯೆ :080-22269636/37 Ext : 215
ಇ-ಮೇಲ್ : arcs-ldb-ka@nic.in

ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವ್ಯವಸ್ಥೆ

    ರಾಜ್ಯದ ಅರ್ಥ ವ್ಯವಸ್ಥೆ ವ್ಯವಸಾಯವನ್ನು ಅವಲಂಬಿಸಿರುತ್ತದೆ. ಶೇ.65 ರಷ್ಟು ಜನಸಂಖ್ಯೆ ಕೃಷಿ ಅವಲಂಬಿತರಾಗಿರುತ್ತಾರೆ. ಆರ್ಥಿಕ ಅಭಿವೃದ್ದಿಯಲ್ಲಿ ಸಾಲ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ದಿ ಹೊಂದುತ್ತಿರುವ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಸಾಲ ತನ್ನದೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಕೃಷಿ ಉತ್ಪಾದನೆಗೆ ಸಾಲ ವ್ಯವಸ್ಥೆ ಅತಿ ಮುಖ್ಯವಾಗಿರುತ್ತದೆ.

  • ಸಹಕಾರ ಚಳುವಳಿಯಲ್ಲಿ ಸಹಕಾರ ಸಾಲ ವ್ಯವಸ್ಥೆ ಅತ್ಯಂತ ಹಳೆಯದಾಗಿರುತ್ತದೆ ಹಾಗೂ ಇದರಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವ್ಯವಸ್ಥೆ ಇರುತ್ತದೆ.

  • ಅಲ್ಪಾವಧಿ ಸಾಲ ವ್ಯವಸ್ಥೆಯಲ್ಲಿ ಮೂರು ಹಂತಗಳಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಮಾಧ್ಯಮಿಕ ಹಂತದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಹಾಗೂ ಉತ್ತುಂಗ ಹಂತದಲ್ಲಿ ಸಹಕಾರ ಅಪೆಕ್ಸ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿವೆ.

  • ಅಲ್ಪಾವಧಿ ಸಾಲವು ಬೆಳೆ ಉತ್ಪಾದನೆ ಸಾಲವಾಗಿದ್ದು, ಮಧ್ಯಮಾವಧಿ ಸಾಲವು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಚಿಕ್ಕಪುಟ್ಟ ಅಭಿವೃದ್ದಿಗಳನ್ನು ಹೊಂದಿರುತ್ತವೆ. 4848 ಕ್ರಷಿ ಪತ್ತಿನ ಸಹಕಾರ ಕಾರ್ಯನಿರತವಾಗಿದ್ದು, ಈ ಎಲ್ಲಾ ಸಂಘಗಳು ರಾಜ್ಯದ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಅಧ್ಯರ್ಪಿತಗೊಂಡಿರುತ್ತವೆ. ಜಿಲ್ಲಾ ಬ್ಯಾಂಕುಗಳ 596 ಶಾಖೆಗಳು ಇವುಗಳ ಸಾಲ ವಿತರಣೆಗೆ ಶ್ರಮ ವಹಿಸುತ್ತಿವೆ. ಈ ಎಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಪುನರ್ಧನವನ್ನು ನಬಾರ್ಡ ಮತ್ತು ಅಪೆಕ್ಸ್ ಬ್ಯಾಂಕ್ ವತಿಯಿಂದ ಪಡೆಯುತ್ತಿವೆ. ಪ್ರತಿ ರೈತನ ಸರಾಸರಿ ಸಾಲ ರೂ. 37716 ಹಾಗೂ ಪ್ರತಿ ಕೃಷಿ ಪತ್ತಿನ ಸಹಕಾರ ಸಂಘದ ಸಾಲ ವಿತರಣೆ ಸರಾಸರಿ 168.75 ಲಕ್ಷಗಳಾಗಿರುತ್ತವೆ.

  • ಕಾಸ್ಕಾರ್ಡ ಬ್ಯಾಂಕ್ ರಾಜ್ಯಮಟ್ಟದಲ್ಲಿ ಹಾಗೂ ಪಿಕಾರ್ಡ ಬ್ಯಾಂಕುಗಳು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. 177 ಪಿಕಾರ್ಡ್ ಬ್ಯಾಂಕುಗಳು ದೀರ್ಘಾವಧಿ ಸಾಲ ವಿತರಣೆ ಮಾಡುತ್ತಿದ್ದು ಈ ಸಾಲ ಎರಡು ಹಂತದ್ದಾಗಿರುತ್ತದೆ.

ರೈತರ ಕೃಷಿ ಸಾಲ ಶೇ 6 ರ ಬಡ್ಡಿ ದರದಲ್ಲಿ :

     ಘನ ರಾಜ್ಯ ಸರ್ಕಾರವು ದಿ; 1-4-2004 ರಿಂದ ಜಾರಿಗೆ ಬರುವಂತೆ ರಾಜ್ಯದ ಕೃಷಿಕರಿಗೆ ಶೇ.6 ರ ಬಡ್ಡಿ ದರದಲ್ಲಿ ಕೃಷಿ ಸಾಲ ಒದಗಿಸಿರುತ್ತದೆ. ಈ ದಿಸೆಯಲ್ಲಿ 60 ಕೋಟಿ ಮತ್ತು 80 ಕೋಟಿ ರೂಗಳನ್ನು 2004 ಮತ್ತು 2005-06 ನೇ ಸಾಲಿನಲ್ಲಿ ಕ್ರಮವಾಗಿ ಈ ಯೋಜನೆಯಡಿ ಮಂಜೂರು ಮಾಡಿದ್ದು ಈ ಹಣವನ್ನು ಸರಾಸರಿ ಶೇ.5.5 ರಬಡ್ಡಿಯ ವ್ಯತ್ಯಾಸದ ದರದಲ್ಲಿ ಪಡೆಯಬಹುದಾಗಿದೆ.

ರೈತರ ಕೃಷಿ ಸಾಲ ಶೇ 4 ರ ಬಡ್ಡಿ ದರದಲ್ಲಿ :

    ಘನ ರಾಜ್ಯ ಸರ್ಕಾರವು ದಿ: 1-4-2006 ರಿಂದ ಜಾರಿಗೆ ಬರುವಂತೆ ಶೇ. 4 ರ ಬಡ್ಡಿ ದರವನ್ನು ಜಾರಿಗೊಳಿಸಿದ್ದು ವ್ಯತ್ಯಾಸದ ಶೇ.7.5 ರಬಡ್ಡಿಯನ್ನು ಸಹಕಾರ ಸಂಘಗಳಿಂದ ಭರಿಸಲು ಸರ್ಕಾರವು ರೂ.153.41 ಕೋಟಿ ರೂಗಳನ್ನು ಬಿಡುಗಡೆಗೊಳಿಸಿರುತ್ತದೆ.

ರೈತರ ಕೃಷಿ ಸಾಲ ಶೇ 3ರ ಬಡ್ಡಿ ದರದಲ್ಲಿ :

    ಘನ ರಾಜ್ಯ ಸರ್ಕಾರವು ದಿ: 1-4-2008 ರಿಂದ ಜಾರಿಗೆ ಬರುವಂತೆ ಶೇ. 3 ರ ಬಡ್ಡಿ ದರವನ್ನು ಜಾರಿಗೊಳಿಸಿದ್ದು ವ್ಯತ್ಯಾಸದ ಶೇ.7.5 ರಬಡ್ಡಿಯನ್ನು ಸಹಕಾರ ಸಂಘಗಳಿಂದ ಭರಿಸಲು ಸರ್ಕಾರವು ರೂ.27700.00 ಲಕ್ಷಗಳನ್ನು 2010-11 ರ ಆಯವ್ಯಯದಲ್ಲಿ ಕಾಯ್ದಿರಿಸಲಾಗಿತ್ತು. ಈ ಪೂರ್ಣ ಮೊಬಲಗನ್ನು 14,76,251 ಜನ ರೈತರಿಗೆ ಸಹಕಾ ಸಂಸ್ಥೆಗಳ ಮೂಲಕ ಬಿಡುಗಡೆಗೊಳಿಸಲಾಗಿದೆ .

ರೈತರ ಕೃಷಿ ಸಾಲ ಶೇ 1 ರ ಬಡ್ಡಿ ದರದಲ್ಲಿ :

    ಈ ಯೋಜನೆಯು ರೈತರ ರೂ.3.00 ಲಕ್ಷ ರೂ.ಗಳವರೆಗಿನ ಸಾಲಗಳಿಗೆ ಅನ್ವಯಿಸಲಿದ್ದು ಇದು ದಿ: 31-3-2011 ಕ್ಕೆ ಬಾಕಿ ಆಗಲಿರುವ ಸಾಲಗಳಿಗೆ ಅನ್ವಯಿಸುತ್ತದೆ. ರೂ.3.00 ಲಕ್ಷಗಳಿಂದ ರೂ.10.00 ಲಕ್ಷಗಳವರೆಗಿನ ಸಾಲಗಳಿಗೆ ಯಥಾ ಶೇ.3 ಬಡ್ಡಿ ದರ ಅನ್ವಯಿಸುತ್ತದೆ. ಈ ಯೋಜನೆಗೆ ಘನ ರಾಜ್ಯ ಸರ್ಕಾರವು ರೂ. 625.00 ಕೋಟಿ ಆಯವ್ಯಯದಲ್ಲಿ ಕಾಯ್ದಿರಿಸಿದ್ದು. ಯೋಜನೆ ಅನುಷ್ಟಾನಗೊಳಿಸಲು ರೂ. 435.00 ಕೋಟಿ ಬಿಡುಗಡೆಗೊಳಿಸಲಾಗಿದೆ.

      ವಿಶೇಷ ಘಟಕ ಯೋಜನೆಯಡಿಯಲ್ಲಿ 100281 ಜನ ಪ.ಜಾ ಫಲಾನುಭವಿಗಳಿಗ ರೂ.13,100.00 ಲಕ್ಷಗಳು ಹಾಗೂ 77035 ಪ.ಪಂ.ಫಲಾನುಭವಿಗಳಿಗೆ ರೂ.1094.00 ಲಕ್ಷಗಳನ್ನು ಎಸ್. ಸಿ.ಪಿ ಮತ್ತು ಟಿ. ಎಸ್.ಪಿ ಯೋಜನೆಯಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ

ರೈತರ ಕೃಷಿ ಸಾಲ ಶೇ. ಶೂನ್ಯ ಮತ್ತು ಶೇ.1 ರ ಬಡ್ಡಿ ದರದಲ್ಲಿ (2012-13):

     ಘನ ರಾಜ್ಯ ಸರ್ಕಾರವು ದಿ: 1-4-2012 ರಿಂದ ಜಾರಿಗೆ ಬರುವಂತೆ ಶೂನ್ಯ ಬಡ್ಡಿ ದರದಲ್ಲಿ ರೂ.1.00 ಲಕ್ಷಗಳವರೆಗಿನ ಸಾಲಗಾರರಿಗೆ ಒದಗಿಸಲಾಗಿದ್ದು ರೂ.1.00 ಲಕ್ಷದಿಂದ ರೂ.3.00 ಲಕ್ಷದ ಸಾಲಗಾರರಿಗೆ ಶೇ.1 ರ ಬಡ್ಡಿ ದರ ಮುಂದುವರೆದಿರುತ್ತದೆ. ಮತ್ತು ಶೇ.3 ರ ಬಡ್ಡಿ ದರದಲ್ಲಿ ಮದ್ಯಮ ಮತ್ತು ದೀರ್ಘಾವದಿ ಕೃಷಿ ಸಾಲವನ್ನು ರೂ.10 ಲಕ್ಷಗಳವರೆಗೆ ವಿತರಣೆ ಮುಂದುವರೆದಿರುತ್ತದೆ. ಈ ದಿಸೆಯಲ್ಲಿ ಆಯವ್ಯಯದಲ್ಲಿ 392.04 ಕೋಟಿಗಳನ್ನು ಕಾಯ್ದಿರಿಸಲಾಗಿದ್ದು ರೂ 392.03 ಕೋಟಿ ಬಿಡುಗಡೆಗೊಳಿಸಲಾಗಿದೆ.

2014 -15 ನೇ ಸಾಲಿನ ಯೋಜನೆ

                2014 -15 ನೇ ಸಾಲಿನಲ್ಲಿ23.50 ಲಕ್ಷ ರೈತರಿಗೆ ರೂ. 10000.00 ಕೋಟಿಗಳನ್ನು ಕೃಷಿ ಸಾಲ ವಿತರಣೆಗೆ ಆಯೋಜಿಸಿದ್ದು , 3 ಲಕ್ಷದವರೆಗೆ ಸಾಲವನ್ನು 0% ಬಡ್ಡಿ ದರದಲ್ಲಿ ವಿತರಿಸಬೇಕಾಗಿರುತ್ತದೆ.

ಸಾಲ ವಿತರಣೆ :

ದಿ:1-4-2013 ರಿಂದ ದಿ: 31-3-2014 ರವರೆಗಿನ ಕೃಷಿ ಸಾಲ ವಿತರಣೆ

                                                                                                                                                                       (ರೂ. ಕೋಟಿಳಲ್ಲಿ )

ಕ್ರ.ಸಂ

ವಿವರಗಳು

ಸಂಖ್ಯೆ

ಮೊತ್ತ

ಇದರಲ್ಲಿ ಹೊಸ ಸದಸ್ಯರು

ಇದರಲ್ಲಿ ಪ.ಜಾ/ ಪ.ಪಂ ಸದಸ್ಯರು

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

1

ಅಲ್ಪಾವಧಿ ಸಾಲ

1628831

6030.28

146115

418.70

197700

526.83

2

ಮದ್ಯಮಾವಧಿ ಸಾಲ

23998

314.38

19633

253.61

2605

17.26

3

ದೀರ್ಘಾವಧಿ ಸಾಲ

18791

205.52

10327

93.82

578

5.62

 

  ಒಟ್ಟು

1671620

6550.18

176075

829.13

200883

549.71

Top


ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವಿತರಿಸಲಾದ ಅಲ್ಪಾವಧಿ ಸಾಲಗಳಲ್ಲಿ ವಿವಿಧ ಸಹಕಾರ ಸಂಸ್ಥೆಗಳ ಪಾಲು :

ಕ್ರ.ಸಂ

ಸಂಸ್ಥೆಯ ಹೆಸರು

ನಿಯೋಜಿತ ಮೊತ್ತ
(ರೂ.ಕೋಟಿಗಳಲ್ಲಿ) )

1

ನಬಾರ್ಡ

4025.00

2

ಅಪೆಕ್ಸ್ ಬ್ಯಾಂಕ್

1092.06

3

ಡಿಸಿಸಿ ಬ್ಯಾಂಕ್

1990.85

4

ಪಿ.ಎ.ಸಿ.ಎಸ್ (ಸ್ವಂತ ಬಂಡವಾಳ)

301.37

4

ವಾಣಿಜ್ಯ ಬ್ಯಾಂಕ್

150.45

 

ಒಟ್ಟು

7559.73 

ಕರ್ನಾಟಕ ರಾಜ್ಯದಲ್ಲಿ ಅಲ್ಪಾವಧಿ, ಮದ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಕಾರ್ಯ ನಿರ್ವಹಣೆ

     12 ನೇ ಪಂಚ ವಾರ್ಷಿಕ ಯೋಜನೆಯಲ್ಲಿ ರೂ.60321.68 ಕೋಟಿಗಳಿಗೆ ಎದುರಾಗಿ ರೂ.14630.99 ಕೋಟಿ ಸಾಲ ವಿತರಣೆ ಯೋಜನೆ, ಇದ್ದು ಶೇ.24.25% ಸಾಧನೆಯಾಗಿರುತ್ತದೆ. 2014-15 ನೇ ಸಾಲಿಗೆ ರೂ. 10000.00 ಕೋಟಿಗಳ ಗುರಿ ಹೊಂದಲಾಗಿದೆ.

       ಅಲ್ಪಾವಧಿ, ಮದ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳು ವಿತರಣೆ ದಿ: 31-3-2014 ಕ್ಕೆ ರೂ.7559.73 ಕೋಟಿಗಳು, ರೂ.309.08 ಕೋಟಿಗಳು ಮತ್ತು ರೂ.212.00 ಕೋಟಿಗಳು ಕ್ರಮವಾಗಿ ಆಗಿದ್ದು, ವಾರ್ಷಿಕ ಗುರಿಗೆ ಎದುರಾಗಿ ಶೇ.95.13 ಸಾಧನೆಯಾಗಿರುತ್ತದೆ.

2011-12 ರಿಂದ 2013-14 ರವರೆಗೆ ಕೃಷಿ ಪತ್ತಿನ ಸಾಲದ ಪ್ರಗತಿಯ ವಿವರ
                                                                                                                                                                                             ( ರೂ. ಕೋಟಿಗಳಲ್ಲಿ )

ವರ್ಷ

 ಅಲ್ಪಾವಧಿ ಸಾಲ

ಮದ್ಯಮಾವಧಿ ಸಾಲ

 ದೀರ್ಘಾವಧಿ ಸಾಲ

 ಒಟ್ಟು ಸಾಲ

ಶೇ (%)

ಗುರಿTarget

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

2011-12

5400.00

5631.05

300.00

243.17

181.60

191.80

5881.60

6066.02

103.13

2012-13

6400.00

6030.00

300.00

314.38

187.08

205.52

6887.08

6344.67

95.11

2013-14

7936.00

7559.73

375.00

309.08

183.08

212.00

8484.98

8080.81

95.13

#

 

#

 

#

 

Top

ಸಾಲ ವಸೂಲಾತಿ

          

                                                                                                                                                                                                             ರೂ ಕೋಟಿಗಳಲ್ಲಿ

ವರ್ಷ

ಅಲ್ಪಾವಧಿ

ಮದ್ಯಮಾವಧಿ

ದೀರ್ಘಾವಧಿ

ತಗಾದೆ

ವಸೂಲಿ

ಬಾಕಿ

ಶೇ %

ತಗಾದೆ

ವಸೂಲಿ

ಬಾಕಿ

ಶೇ %

ತಗಾದೆ

ವಸೂಲಿ

ಬಾಕಿ

ಶೇ %

2011-12

4633.81

4432.48

201.32

95.66

117.14

98.21

19.20

83.65

636.33

292.71

343.61

46.00

2012-13

5256.90

4485.64

771.26

85.32

145.18

120.04

25.14

82.68

572.92

286.72

286.20

50.04

2013-14

6257.16

6061.20

195.96

88.53

87.96

74.67

13.29

84.88

726.37

381.34

345.03

52.50

 


ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕುಗಳಲ್ಲಿನ ವಿವರಗಳು

(ರೂ. ಲಕ್ಷಗಳಲ್ಲಿ )

ಕ್ರ.ಸಂ

ವಿವರಗಳು

2011-12

2012-13

2013-14

1

ಸಂದಾಯವಾದ ಷೇರು ಬಂಡವಾಳ

5207.96
5207.96
5654.94

ಇದರಲ್ಲಿ ಸರ್ಕಾರದ್ದು

445.55
445.55
444.54

2

ಆಪದ್ದನ ನಿಧಿ

2658.46
2830.67
2832.04

3

ಇತರೆ ನಿಧಿಗಳು

2284.15
1990.37

2100.54

4

ಅನುತ್ಪಾದಕ ಆಸ್ತಿ ಅವಕಾಶ

9723.46
9723.46
8957.30

5

ಭದ್ರತಾ ಠೇವಣಿ

2922.27
4420.10
7387.63

6

ಇತರೆ ಠೇವಣಿ

3739.83
3890.37
4481.15

7

ಬಾರೋಯಿಂಗ್ಸ್, ಡಿಬೆಂಚ್ ರ್ಸ ಮತ್ತು ಒವರ್ ಡ್ರಾಫ್ಟ್ .

156683.19
131546.88
141592.14

8

ದುಡಿಯುವ ಬಂಡವಾಳ

198072.08
207975.69
201088.64

9

ಮುಳುಗುವ ನಿಧಿ ಹೂಡಿಕೆ

634.00
634.00
-

10

ಇತರೆ ಹೂಡಿಕೆ

6513.00
3897.60
7947.97

11

ಸಾಮಾನ್ಯ ಹೂಡಿಕೆ (ಅಲ್ಪಾವಧಿ ಠೇವಣಿ)

36049.80
23131.17
17855.28

12

ಒಟ್ಟು ಸಾಲ ಬಾಕಿ

133560.42
134303.85
137679.13

13

177 ಪಿ.ಸಿ.ಎ.ಆರ್.ಡಿ ಬ್ಯಾಂಕುಗಳ ಷೇರು ಬಂಡವಾಳ

12056.75
11565.70
12998.05
Top

ಕಿಸಾನ್ ಕ್ರೆಡಿಟ್ ಕಾರ್ಡ

      ರೈತರ ಅವಶ್ಯಕತೆಗನುಗುಣವಾಗಿ ಹಾಗೂ ಸಮಯೋಚಿತ ಸಾಲ ಸೌಲಭ್ಯಕ್ಕಾಗಿ 1997-98 ರಿಂದ ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆಯನ್ನು ಜಾರಿಗೊಳಿಸಲಾಯಿತು. ದಿ:31-3-2014 ಕ್ಕೆ ಇದ್ದಂತೆ 23,54,523 ಕೆಸಿಸಿ ಕಾರ್ಡ ಗಳನ್ನು ವಿತರಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ 205384 ರೈತರಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಅಳವಡಿಸಲಾಗಿದೆ.

 

ಸ್ವಸಹಾಯ ಸಂಘಗಳು

ಸ್ವಸಹಾಯ ಸಂಘಗಳಿಗೆ ಬಡ್ಡಿ ಸಹಾಯಧನ :-

      ದಿ:1-4-2007 ರಿಂದ ಶೇ. 4 ರ ಬಡ್ಡಿ ದರದಲ್ಲಿ ಸ್ವಸಹಾಯ ಸಂಘಗಳಿಗೆ (ಗುಂಪುಗಳು) ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲಾಯಿತು. 2013-14 ನೇ ಸಾಲಿಗೆ ಒಟ್ಟು 36980 ಗುಂಪುಗಳಿಗೆ ರೂ.56950.00 ಲಕ್ಷಗಳ ಸಾಲವನ್ನು ವಿತರಿಸಲಾಗಿದೆ ಮತ್ತು 2000 ಲಕ್ಷಗಳ ಬಡ್ಡಿ ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ.

                                                                                                                                                                                                 ರೂ ಲಕ್ಷಗಳಲ್ಲಿ

#

Top

ಅಲ್ಪಾವಧಿ ಸಹಕಾರ ಕೃಷಿ ಪತ್ತಿನ ವ್ಯವಸ್ಥೆಯ ಪುನಶ್ಚೇತನ ಪ್ಯಾಕೇಜ

ವರ್ಷ

ಗುಂಪುಗಳ ರಚನೆ

ಹೊಸ ಸಾಲ ನೀಡಿಕೆ

ಹಳೆ ಸಾಲಗಾರರಿಗೆ ನವೀಕರಣ

ಒಟ್ಟು ಸಾಲಗಳು

ಗುರಿ

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

ಗುರಿ

ಸಾಧನೆ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

ಸಂಖ್ಯೆ

ಮೊತ್ತ

2011-12

25000

14296

25500

25500

12418

8086

24750

49500

22728

33906

50250

75000

35416

41992

2012-13

25000

17350

25500

25500

11531

9892

24750

49500

25169

42067

50250

75000

36700

51959

2013-14

30000

13765

33150

33150

11097

9634

32175

64350

25883

47323

65325

97500

36980

56950

      .ವೈದ್ಯನಾಥನ್ ಕಾರ್ಯಪಡೆಯ ಶಿಫಾರಸ್ಸಿನ ಆಧಾರದ ಮೇಲೆ ರೂಪಿಸಲಾದ ಅಲ್ಪಾವಧಿಸಹಕಾರ ಕೃಷಿ ಪತ್ತಿನ ವ್ಯವಸ್ಥೆಯ ಪುನಶ್ಚೇತನ ಪ್ಯಾಕೇಜನ್ನು ಅನುಷ್ಟಾನಗೊಳಿಸಲು ಕರ್ನಾಟಕ ಸರ್ಕಾರವು, ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕಿನೊಡನೆ ದಿ: 25-3-2008 ರಂದು ಒಡಂಬಡಿಕೆಗೆ ಸಹಿ ಮಾಡಿರುತ್ತದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅನುಷ್ಟಾನ ಸಮಿತಿಯು (ಎಸ್ಎಲ್ಐಸಿ) ದಿ: 31-3-2011 ಕ್ಕೆ ಇದ್ದಂತೆ ರಾಜ್ಯದ ಎಲ್ಲಾ ಜಿಲ್ಲಾ ಬ್ಯಾಂಕುಗಳ ವ್ಯಾಪ್ತಿಯಲ್ಲಿ ಬರುವ 4474 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಎಸಿಎಸ್) ಗಳಿಗೆ ರೂ.769.87 ಕೋಟಿ ಮಂಜೂರು ಮಾಡಿರುತ್ತದೆ.

   ದಿ:31-3-2010 ರ ಅಂತ್ಯಕ್ಕೆ ಈ ಕೆಳಕಂಡಂತೆ ಪುನ:ಶ್ಚೇತನ ಪ್ಯಾಕೇಜ್ಅನುದಾನವನ್ನು ರಾಜ್ಯಮಟ್ಟದ ಅನುಷ್ಟಾನ ಸಮಿತಿಯು ಮಂಜೂರು ಮಾಡಿರುತ್ತದೆ.

                                                                                                                                                                                (ರೂ ಕೋಟಿಗಳಲ್ಲಿ )

ಕ್ರ.ಸಂ

 

ಪ್ಯಾಕ್ಸ್ ಗಳ ಸಂಖ್ಯೆ

ಪ್ಯಾಕ್ಸಗಳ ವರ್ಗ


ಒಟ್ಟು ಪ್ಯಾಕೇಜ್ ಅನುದಾನದ ಮೊತ್ತ


ಕೇಂದ್ರ ಸರ್ಕಾರದ ಪಾಲು


ರಾಜ್ಯ ಸರ್ಕಾರದ ಪಾಲು


ಪ್ಯಾಕ್ಸ್ ಗಳ ಪಾಲು


ಒಟ್ಟು

1

2009-10
ಮೊದಲನೆ ಕಂತು

1834

ಎ ವರ್ಗ

139.74

39.53

23.00

202.27

2

2010-11
ಎರಡನೇ ಕಂತು

1459

ಬಿ ವರ್ಗ

201.62

25.97

17.84

245.43

3

ಮೂರನೇ ಕಂತು

960

ಸಿ ವರ್ಗ

215.17

21.22

28.47

264.86

4

ಅನರ್ಹ ಪ್ಯಾಕ್ಸ ಗಳು

220

-

45.6

5.17

6.54

57.31

ಒಟ್ಟು

4473

ಎ,ಬಿ,ಸಿ,ಡಿ ಪ್ಯಾಕ್ಸ್ ಗಳು

602.13

91.89

75.85

769.87

       

 • 219 ಅನರ್ಹ ಪ್ಯಾಕ್ಸ ಗಳಿಗೆ ನಿಗದಿಪಡಿಸಿರುವ ಸಹಾಯಧನವು ರೂ.50.77 ಕೋಟಿ (ಭಾರತ ಸರ್ಕಾರ ರೂ.45.60 ಕೋಟಿ ರಾಜ್ಯ ಸರ್ಕಾರರೂ.5.17 ಕೋಟಿ) ಇದ್ದು ಈ ಬಗ್ಗೆ ರಾಜ್ಯಮಟ್ಟದ ಅನುಷ್ಟಾನ ಸಮಿತಿಯು ತೀರ್ಮಾನಿಸಬೇಕಿದೆ.

 • ಪ್ಯಾಕ್ಸ್ ಗಳ ಪಾಲು ರೂ.75.85 ಕೋಟಿಗಳನ್ನು ತಮ್ಮ ಸ್ವಂತ ಬಂಡವಾಳದಿಂದ ಭರಿಸಬೇಕಾಗಿದ್ದು ಅವು ವ್ಯಾಪಾರ ಅಭಿವೃದ್ದಿ ಯೋಜನೆಯಡಿ (ಬಿಡಿಪಿ) ತಮ್ಮ ಸ್ವಂತ ಸಂಪನ್ಮೂಲಗಳನ್ನು ವೃದ್ದಿಪಡಿಸಿಕೊಳ್ಳಬೇಕಾಗಿದೆ.

 • 2009-10 ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಪತ್ತಿನ ವ್ಯವಸ್ಥೆಯ ಪುನಶ್ಚೇತನ ಪ್ಯಾಕೇಜ್ ಅನುಷ್ಟಾನಕ್ಕಾಗಿ ಮೊದಲನೆ ಕಂತಾಗಿ ರೂ.202.27 ಕೋಟಿಗಳನ್ನು 2010ಮಾರ್ಚನಲ್ಲಿ ‘ಎ’ ವರ್ಗದ 1834 ಪ್ಯಾಕ್ಸ್ ಗಳಿಗೆ ಸಂಬಂಧಪಟ್ಟ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಮುಖಾಂತರ ಜಮಾ ಮಾಡಲಾಗಿದೆ.

 • 2010-11 ನೇ ಸಾಲಿನಲ್ಲಿ ಬೀದರ್ ಮತ್ತು ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕುಗಳಿಗೆ ಅಭ್ಯರ್ಪಿಸಲ್ಪಡುವ ‘ಎ’ ವರ್ಗದ ಪ್ಯಾಕ್ಸ ಗಳಿಗೆ ಮತ್ತು ಉಳಿದಂತೆ ಎಲ್ಲಾ ಜಿಲ್ಲೆಗಳ ಬಿ ಮತ್ತು ಸಿ ವರ್ಗದ ಒಟ್ಟು 1459 ಪ್ಯಾಕ್ಸ್ ಗಳಿಗೆ ರೂ.245.43 ಕೋಟಿಗಳ ಪುನ:ಶ್ಚೇತನ ಪ್ಯಾಕೇಜಿನ ಎರಡನೇ ಕಂತಿನ ಮೊತ್ತವನ್ನು 2011 ಮಾರ್ಚ ನಲ್ಲಿ ಸಂಬಂಧಪಟ್ಟ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಮುಖಾಂತರ ಪ್ಯಾಕ್ಸ್ ಗಳಿಗೆ ಜಮಾ ಮಾಡಲಾಗಿದೆ ಹಾಗೂ ಉಳಿದ ಎರಡನೇ ಕಂತಿನ ಪ್ಯಾಕೇಜ್ ಮೊತ್ತವು ‘ಸಿ’ ವರ್ಗದ 960 ಪ್ಯಾಕ್ಸ್ ಗಳಿಗೆ ಮೂರನೇ ಕಂತಿನ ರೂಪದಲ್ಲಿ ರೂ.264.86 ಕೋಟಿಗಳನ್ನು 2011 ಏಪ್ರಿಲ್ ನಲ್ಲಿ ಸಂಬಂಧಪಟ್ಟ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಮುಖಾಂತರ ಪ್ಯಾಕ್ಸ್ ಗಳಿಗೆ ಜಮಾ ಮಾಡಲಾಗಿದೆ.

 • ಜಿಲ್ಲಾ ಬ್ಯಾಂಕುಗಳ ಪೈಕಿ ದುರ್ಬಲ ಬ್ಯಾಂಕುಗಳಾದ ಧಾರವಡ ಕೆಸಿಸಿ ಬ್ಯಾಂಕಿಗೆ ರೂ.126.81 ಕೋಟಿಗಳು ಮತ್ತು ಕೋಲಾರ ಜಿಲ್ಲೆ ಬ್ಯಾಂಕಿಗೆ ರೂ.69.09 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.ಇದರಿಂದ ಈ ಎರಡೂ ಬ್ಯಾಂಕುಗಳು 2011-12 ನೇ ಸಾಲಿನಲ್ಲಿ ಪುನಶ್ಚೇತನಗೊಳ್ಳಲು ಸಹಕಾರಿಯಾಗಿರುತ್ತದೆ.ಇದರಿಂದ ಎಲ್ಲಾ 21 ಡಿಸಿಸಿ ಬ್ಯಾಂಕುಗಳ ಅಭಿವೃದ್ದಿಗಾಗಿ ಅಭಿವೃದ್ದಿ ಕ್ರಿಯಾ ಯೋಜನೆ (ಡಿಎಪಿ) ಮತ್ತು 4473 ಪ್ಯಾಕ್ಸ್ ಗಳ ಅಭಿವೃದ್ದಿಗಾಗಿ ವ್ಯಾಪಾರ ಅಭಿವೃದ್ದಿ ಯೋಜನೆಯಡಿ (ಬಿಡಿಪಿ) ಯನ್ನು ಜಾರಿಗೊಳಿಸಿ ಮೂರು ವರ್ಷದಲ್ಲಿ ಇವುಗಳನ್ನು ಆರ್ಥಿಕವಾಗಿ ಸಬಲತೆಯನ್ನು ಹೊಂದಿ ಸದೃಢ ಸಹಕಾರಿ ಸಂಸ್ಥೆಗಳಾಗಿ ಹೊರಹೊಮ್ಮಲು ಕ್ರಮವಿಡಲಾಗಿದೆ.

   ಪುನ:ಶ್ಚೇತನ ಪ್ಯಾಕೇಜ್ ಅನುಷ್ಟಾನದ ನಂತರದ ಪ್ರಗತಿಯ ವಿವರ

ಕ್ರ.ಸಂ

ವಿವರಗಳು

ಅನುಷ್ಟಾನಕ್ಕೆ ಪೂರ್ವದಲ್ಲಿ ಇದ್ದ ಪ್ರಗತಿ (31-03-2010) (1-4-2009 to 31-3-2010) 

ಅನುಷ್ಟಾನದ ನಂತರದ ಪ್ರಗತಿ
( 31-03-2014 ) (1-4-2013 to 31-3-2014) 

1

ರಾಜ್ಯದಲ್ಲಿರುವ ಒಟ್ಟು ಪ್ಯಾಕ್ಸಗಳ ಸಂಖ್ಯೆ

4613

5270

2

ವ್ಯಾಪಾರ ಅಭಿವೃದ್ದಿ ಯೋಜನೆಗೆ ಆಯ್ಕೆಯಾಗಿರುವ ಪ್ಯಾಕ್ಸ ಗಳ ಸಂಖ್ಯೆ

4403

4535

3

ಚಾಲ್ತಿ ಸಬಲತೆಯನ್ನು ಹೊಂದಿರುವ ಸಂಘಗಳ ಸಂಖ್ಯೆ

1877

4372

4

ನಿರಂತರ ಸಬಲತೆಯನ್ನು ಹೊಂದಿರುವ ಸಂಘಗಳ ಸಂಖ್ಯೆ

1097

1495

5

ಪ್ಯಾಕ್ಸ್ ಗಳು ಸಂಗ್ರಹಿಸಿದ ಒಟ್ಟು ಠೇವಣಿ ಮೊತ್ತ

1869.89 ಕೋಟಿ

5019.31 ಕೋಟಿ (+313.65 ಕೋಟಿ )

6

ಪ್ಯಾಕ್ಸ್ ಗಳ ಒಟ್ಟು ಪತ್ತಿನ ವ್ಯವಹಾರ

4305.98 ಕೋಟಿ

9516.67ಕೋಟಿ (+188.70 ಕೋಟಿ )

7

ಪ್ಯಾಕ್ಸ್ ಗಳ ಒಟ್ಟು ಪತ್ತೇತರ ವ್ಯವಹಾರ

668.58 ಕೋಟಿ

1551.44 ಕೋಟಿ (-828 ಕೋಟಿ )

Top