ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ಮಾರಾಟ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಲಿಜಿ ಫಿಲಿಪ್ಸ್
ಸ. ಸಂ. ಅಪರ ನಿಬಂಧಕರು (ಬಳಕೆ &ಮಾರಾಟ )
,
ದೂರವಾಣಿ ಸಂಖ್ಯೆ :080-22261875,
ಇ-ಮೇಲ್ : addlrcs-cm-ka@nic.in

ಎಂ.ಜಿ.ಹೊಂಗಲ್
ಸ. ಸಂ. ಸಹಾಯಕ ನಿಬಂಧಕರು (ಬಳಕೆ &ಮಾರಾಟ )
,
ದೂರವಾಣಿ ಸಂಖ್ಯೆ 080-22269636/37 Ext : 224 ,
ಇ-ಮೇಲ್ : arcs-cons-ka@nic.in

ಪರಿಚಯ

      ಮಾರುಕಟ್ಟೆ ವಲಯ ಎರಡು ಶ್ರೇಣಿ ವ್ಯವಸ್ಥೆಯನ್ನು ಹೊಂದಿದೆ. ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಒಕ್ಕೂಟ ಅಪೆಕ್ಸ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಕೃಷಿ ಸಹಕಾರಿ ಮಾರಾಟ ಸಂಘಗಳು ಪ್ರಾಥಮಿಕ ಹಂತದಲ್ಲಿ ಕಾರ್ಯನಿರ್ವಹಿಸುತ್ತವೆ. ರಾಜ್ಯದ ಎಲ್ಲಾ ತಾಲ್ಲೂಕುಗಳು ತಾಲ್ಲೂಕು ಪ್ರಾಥಮಿಕ ಮಾರಾಟ ಸಹಕಾರ ಸಂಘಗಳನ್ನು ಒಳಗೊಂಡಿವೆ. ಮಾರಾಟ ಸಂಘಗಳು ಸರ್ಕಾರ ಮತ್ತು ಗ್ರಾಮ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪರವಾಗಿ ಆಹಾರ ಧಾನ್ಯಗಳ ಖರೀದಿ ಮಾಡುತ್ತವೆ. ಮತ್ತು ಗ್ರಾಮೀಣ ವಿತರಣಾ ವ್ಯವಸ್ಥೆಯು ಸಹ ಇವುಗಳ ಪ್ರಮುಖ ಚಟುವಟಿಕೆಯಾಗಿದೆ

       ಕರ್ನಾಟಕದಲ್ಲಿ 189 ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳಿವೆ .ಈ ಸಂಘಗಳ ಜೊತೆಗೆ ವಾಣಿಜ್ಯ ಬೆಳೆಗಳಾದಂತಹ ಅಡಕೆ ಮತ್ತಿತರೆ ಬೆಳೆಗಳೊಂದಿಗೆ ವ್ಯವಹರಿಸುವ ಐದು ವಿಶೇಷ ಮಾರಾಟ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ . ಇಂತಹ ಸಹಕಾರ ಸಂಘಗಳ ವಿವಿಧ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ಮತ್ತು ಮಾರಾಟ ವ್ಯವಸ್ಥೆಯನ್ನು ಪುನರ ರಚಿಸಲು ಅನ್ವಯವಾಗುವಂತೆ ಬೆಳಗಾವಿ,ವಿಜಾಪುರ, ಬಳ್ಳಾರಿ, ರಾಯಚೂರು, ಮಂಡ್ಯ, ಹಾವೇರಿ, ಮೈಸೂರು,ಗುಲ್ಬರ್ಗಾ, ಶಿವಮೊಗ್ಗ ,ಹಾಸನ, ಬೀದರ್, ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜಿಲ್ಲಾ ಸಹಕಾರಿ ಮಾರಾಟ ಯೂನಿಯನ್ ಗಳನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ನಿ.,

      ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳವು 11.11.1943 ರಂದು ಸಹಕಾರ ಸಂಘಗಳ ಕಾಯಿದೆ ಅಡಿ ಸ್ಥಾಪಿಸಲ್ಪಟ್ಟು ಪ್ರಾರಂಭದಲ್ಲಿ ಕಾಫಿಬೀಜ, ಸಕ್ಕರೆ, ಬಟ್ಟೆ, ಸಿಮೆಂಟು ಇತರೆ ಗ್ರಾಹಕ ವಸ್ತುಗಳು ಹಾಗೂ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಭ ಬೆಲೆಯಲ್ಲಿ ದೊರೆಯುವಂತೆ ಕಾರ್ಯ ನಿರ್ವಹಿಸುತ್ತಿತ್ತು. ನಂತರದ ವರ್ಷಗಳಲ್ಲಿ ಕೃಷಿ ಪರಿಕರ ಗಳಾದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನುಖರೀದಿಸಿ,ರಾಜ್ಯಾದ್ಯಂತಇರುವ 40 ಶಾಖೆಗಳಿಂದ ತನ್ನ ಸದಸ್ಯರಾದ ಸಹಕಾರ ಸಂಘಗಳ ಮೂಲಕ ರೈತರಿಗೆ ಸಕಾಲದಲ್ಲಿ ವಿತರಿಸುತ್ತಿರುವುದಲ್ಲದೆ, ಕೃಷಿ ಉತ್ಪನ್ನಗಳ ಖರೀದಿ ಹಾಗೂ ಮಾರಾಟದ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ರಾಜ್ಯದ ರೈತರ ಶ್ರೇಯೋಭಿವೃದ್ಧಿಗಾಗಿ ಸಹಕಾರ ತತ್ವದಡಿ ದುಡಿಯುತ್ತಿರುವ ರಾಜ್ಯಮಟ್ಟದ ಸಹಕಾರ ಶೃಂಗ ಸಂಸ್ಥೆಯಾಗಿರುತ್ತದೆ..
      ಮಹಾಮಂಡಳದ ಕೀಟನಾಶಕ ತಯಾರಿಸುವ ಪೀಣ್ಯ ಘಟಕದಲ್ಲಿ " ಸಹಕಾರ" ಎಂಬ ಬ್ರ್ಯಾಂಡ್ ಹೆಸರಿನ ಅಡಿಯಲ್ಲಿ ಕೀಟನಾಶಕಗಳನ್ನು ತಯಾರಿಸಲಾಗುತ್ತದೆ .

ಮಹಾಮಂಡಳದ ಪ್ರಮುಖ ಕಾರ್ಯ ಚಟುವಟಿಕೆಗಳು:

 • ರಾಜ್ಯದ ತರಿಗೆ ಅವಶ್ಯಕವಾದ ವಿವಿಧ ರಸಗೊಬ್ಬರಗಳನ್ನು ಮತ್ತು ಕ್ರಿಮಿನಾಶಕಗಳನ್ನು ರಾಜ್ಯಾದ್ಯಂತ ಇರುವ ತನ್ನ 40 ಶಾಖೆಗಳಿಂದ ಸಹಕಾರ ಸಂಘಗಳ ಮುಖಾಂತರ ಸಕಾಲದಲ್ಲಿ ಸರಬರಾಜು ಮಾಡುವುದು.
 • ಸರ್ಕಾರದ ಬೆಂಬಲ ಬೆಲೆ ಯೋಜನೆ,ಮಾರುಕಟ್ಟೆ, ಮಧ್ಯಂತರ ಪ್ರವೇಶ ಯೋಜನೆಗಳಡಿ ಹಾಗೂ ಸ್ವಂತ ಬಂಡವಾಳದಲ್ಲಿ ರೈತರಿಂದ ವಿವಿಧ ಕೃಷಿ ಉತ್ಪನ್ನಗಳನ್ನು ಖರೀದಿಸುವುದು .
 • ರಾಜ್ಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಗೋದಾಮುಗಳನ್ನು ನಿರ್ಮಿಸಿ ಶೇಖರಣಾ ಸೌಲಭ್ಯಗಳನ್ನು ಒದಗಿಸುವುದು..
 • ಷೇರು ಬಂಡವಾಳ :

        ಒಟ್ಟು ಷೇರು ಬಂಡವಾಳ ರೂ. 250.12 ಲಕ್ಷಗಳಿದ್ದು, ಈ ಪೈಕಿ ರಾಜ್ಯಾದ್ಯಂತ ಇರುವ ‘ಎ’ ವರ್ಗ ಅಂದರೆ 173 ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘಗಳಿಂದ ರೂ. 94.82 ಲಕ್ಷಗಳು, ‘ಬಿ’ ವರ್ಗ ಅಂದರೆ ಒಟ್ಟು 315 ಗ್ರಾಹಕ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘಗಳಿಂದ ರೂ.29.00 ಲಕ್ಷಗಳ ಷೇರು ಬಂಡವಾಳ ಕೂಡಿರುತ್ತದೆ.

  ಆಡಳಿತ ಮಂಡಳಿ :

        ‘ಎ’ ವರ್ಗದ ಸದಸ್ಯ ಸಂಘಗಳಿಂದ ಜಿಲ್ಲೆಗೆ ಒಬ್ಬರಂತೆ ಚುನಾಯಿಸಲ್ಪಟ್ಟ ಸದಸ್ಯರುಗಳು ಹಾಗೂ ‘ಬಿ’ ವರ್ಗದ ಸದಸ್ಯ ಸಂಘಗಳಿಂದ ಚುನಾಯಿಸಲ್ಪಟ್ಟ ಒಬ್ಬ ಸದಸ್ಯರು, ಸಹಕಾರ ಸಂಘಗಳ ನಿಬಂಧಕರು, ವ್ಯವಸ್ಥಾಪಕ ನಿರ್ದೇಶಕರುಗಳನ್ನು ಒಳಗೊಂಡಂತೆ ರಚಿಸಲ್ಪಟ್ಟ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಒಟ್ಟು 206 ಅನುಮೋದಿತ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ.

  ಮಹಾಮಂಡಳದ ವ್ಯಾಪಾರ ವಹಿವಾಟಿನ ವಿವರ :

        ಮಹಾಮಂಡಳವು ರಾಜ್ಯದ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ರೈತರ ಪ್ರಮುಖ ಅವಶ್ಯಕತೆಯಾದ ರಸಗೊಬ್ಬರವನ್ನು ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡುತ್ತಲಿದೆ . 2013-14 ನೇ ಸಾಲಿನಲ್ಲಿ 7.05 ಲಕ್ಷ ಮೆಟ್ರಿಕ್ ಟನ್ ರ ಸಗೊಬ್ಬರ ವಿತರಿಸಿರುತ್ತದೆ. ಅದೇ ರೀತಿ ರೈತರು ಬೆಳೆದ ಉತ್ಪನ್ನಗಳನ್ನು ಸರ್ಕಾರದ ಬೆಂಬಲ ಬೆಲೆಯೋಜನೆ,ಮಧ್ಯಂತರ ಮಾರುಕಟ್ಟೆ ಪ್ರವೇಶಯೋಜನೆಗಳಡಿ ಹಾಗೂ ಸ್ವಂತ ಬಂಡವಾಳದಲ್ಲಿ ಖರೀದಿಸುವ ಮೂಲಕ ರೈತರಿಗೆ ಸಹಾಯ ಹಸ್ತ ನೀಡುತ್ತಿದೆ .
                          ವರ್ಷದ ವ್ಯಾಪಾರ ವಹಿವಾಟು      ( ರೂ ಕೋಟಿಗಳಲ್ಲಿ )

  ಕ್ರ ಸಂ

  ವರ್ಷ

  ಮೊಬಲಗೂ

  1

  2008-09

  486.21

  2

  2009 -10

  825.00

  3

  2010-11

  811.80

  4

  2011-12

  1019.06

  5

  2012-13

  1120.33

  6

  2013-14

  864.00

        ಮಹಾಮಂಡಳವು ರಾಜ್ಯಾದ್ಯಂತ ತನ್ನದೇ ಆದ ಒಟ್ಟು 1.17 ಲಕ್ಷಮೆ.ಟನ್ ಸಮರ್ಥ್ಯದ ಗೋದಾಮುಗಳನ್ನು ಹೊಂದಿರುತ್ತದೆ .ಹಾಗೂ ಗೋದಾಮುಗಳ ಸಮರ್ಥ್ಯವನ್ನು ಅವಶ್ಯಕತೆ ಗನುಗುಣವಾಗಿ ಹೆಚ್ಚಿಸಲು ವಿವಿಧ ಯೋಜನೆಗಳಡಿಯಲ್ಲಿ ಕಾರ್ಯ ಕ್ರಮ ರೂಪಿಸಿಕೊಳ್ಳಲಾಗಿದೆ .
  Top