ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ಸಂಸ್ಕರಣ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : :

ನುಸರತ್ ಮುವಾಹಿದಾ ಬೇಗಂ,
ಸ.ಸಂ. ಅಪರ ನಿಬಂಧಕರು
( ಬಳಕೆ & ಮಾರಾಟ ) ,
ದೂರವಾಣಿ ಸಂಖ್ಯೆ :080-22261875 ,
ಇ-ಮೇಲ್ : addlrcs-cm-ka@nic.in

ಎಲ್ ಸರಳ ,
ಸ. ಸಂ. ಸಹಾಯಕ ನಿಬಂಧಕರು (ಬಳಕೆ &ಮಾರಾಟ
),
ದೂರವಾಣಿ ಸಂಖ್ಯೆ :080-22269636/37 Ext : 224,
ಇ-ಮೇಲ್ : arcs-cons-ka@nic.in

Top

ಕರ್ನಾಟಕ ರಾಜ್ಯ ಸಹಕಾರಿ ಎಣ್ಣೆ ಬೀಜ ಮಾರಾಟ ಮಹಾಮಂಡಳ., ಬೆಂಗಳೂರು

ಮಹಾಮಂಡಳವು 325 ಎಣ್ಣೆ ಬೀಜ ಉತ್ಪಾದಕರ ಸಹಕಾರ ಸಂಘಗಳನ್ನುಒಳಗೊಂಡು 116037 ಸದಸ್ಯರನ್ನು ಹೊಂದಿರುತ್ತದೆ.

ಮಾರ್ಚ 31 2019ರ ಅಂತ್ಯಕ್ಕೆ ಮಹಾಮಂಡಳದ ಒಟ್ಟು ಷೇರು ಬಂಡವಾಳ ರೂ. 179.12 ಲಕ್ಷಗಳು ಮತ್ತು ದುಡಿಯುವ ಬಂಡವಾಳ ರೂ.5703.55 ಲಕ್ಷಗಳು ಹಾಗೂ 2018-19ನೇ ಸಾಲಿನಲ್ಲಿ ಮಹಾಮಂಡಳವು ರೂ.22321.73 ಲಕ್ಷಗಳ ವ್ಯಾಪಾರ ವಹಿವಾಟು ನಡೆಸಿ, ರೂ 58.04ಲಕ್ಷಗಳ ನಿವ್ವಳ ಲಾಭಗಳಿಸಿರುತ್ತದೆ .(ತಾತ್ಕಾಲಿಕ) .

ಕ್ಯಾಂಪಕೋ .,ಮಂಗಳೂರು

ಕ್ಯಾಂಪಕೋ ಸಂಘವು 1973 ರಲ್ಲಿ ಕರ್ನಾಟಕ ರಾಜ್ಯ ಸಹಕಾರ ಕಾಯ್ದೆಯಡಿ ಯಲ್ಲಿ ನೊಂದಣಿಯಾಗಿದ್ದು ಇದರ ಮುಖ್ಯ ಉದ್ದೇಶವೇನೆಂದರೇ ಕೋಕೋ ಮತ್ತು ಅಡಿಕೆಯ ಶೇಖರಣೆ, ಸಂಸ್ಕರಣೆ ಮತ್ತು ಮಾರಾಟ ಮಾಡುವುದು ಈ ಸಂಘವು 1988 ರಲ್ಲಿ ರಾಜ್ಯ ಸಹಕಾರಿ ಕಾಯ್ದೆಯಡಿಯಲ್ಲಿ ಮತ್ತೊಮ್ಮೆ ನೊಂದಣಿಯಾಗಿದ್ದು ಅಡಿಕೆ ಮತ್ತು ಕೋಕೋವನ್ನು ಶೇಖರಣೆ , ಸಂಸ್ಕರಣೆ ಮತ್ತು ಮಾರಾಟ ಮಾಡುವುದಕ್ಕೆ ಹಾಗೂ ಇದರ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಕೈಗಾರಿಕೆ ಸ್ಥಾಪನೆಗಾಗಿ ಇದರ ಕಾರ್ಯ ವ್ಯಾಪ್ತಿಯು ಕರ್ನಾಟಕ ಮತ್ತು ಕೇರಳ ರಾಜ್ಯವನ್ನು ಒಳಗೊಂಡಿದೆ. ಚಾಕಲೇಟ್ ನ್ನು ಮಾರಾಟ ಮಾಡುವುದಕ್ಕೆ ಈ ಸಂಸ್ಥೆಯು ತನ್ನದೆ ಆದ ಒಂದು ಟೀಮ್ ನ್ನು ಹೊಂದಿದ್ದು ಈ ಸಂಸ್ಥೆಯು ನೆಸ್ಟಲೇ ಇಂಡಿಯಾ ಮತ್ತು ಎಂ.ಐ.ಎಸ್ ಇವರುಗಳ ಜೊತೆ ತಯಾರಿಕೆ ಮತ್ತು ಸಗಟು ಪೂರೈಕೆಗಘಿ ಉಪ್ಪಂದ ಮಾಡಿಕೊಂಡಿರುತ್ತದೆ..

ಈ ಸಂಸ್ಥೆಯು ಒಂದು ಮೊಬ್ಯಲ್ ಕಚ್ಚಾ ವಸ್ತು ಶೇಖ್ರಣೆ ಘಟಕವನ್ನು ಹೊಂದಿದ್ದು ಎಲ್ಲಿ ಸಾರಿಗೆ ವ್ಯವಸ್ಥೆ ಇರುವುದಿಲ್ಲ ಅಲ್ಲಿ ಇದು ಒಂದು ಒಂದು ಮನೆ ಬಾಗಿಲಿಗೆ ಹೋಗಿ ಕಚ್ಚಾ ವಸ್ತುವನ್ನು ಶೇಖರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ www.campco.org

ವ್ಯಾಪರ ವಹಿವಾಟು ದಿನಾಂಕ:31-3-2019 ಅಂತ್ಯಕ್ಕೆ  

 

 

ಕ್ರ.ಸಂ

ವಿವರ

( ರೂ. ಲಕ್ಷಗಳಲ್ಲಿ )

1

ಷೇರು ಬಂಡವಾಳ

4944.85

2

ಒಟ್ಟು ಶಾಖೆಗಳು

145

3

ವ್ಯಕ್ತಿ ಸದಸ್ಯರ ಸಂಖ್ಯೆ

12036

4

ಸದಸ್ಯ ಸಂಘಗಳ ಸಂಖ್ಯೆ

570

5

ಠೇವಣಿ

9428.08

6

ದುಡಿಯುವ ಬಂಡವಾಳ

31233.34

7

ವ್ಯಾಪಾರ ವಹಿವಾಟು

11831.47

8

ನಿವ್ವಳ ಲಾಭ

3249.69

9

ವಾರ್ಷಿಕ ವಹಿವಾಟು

187498.40

 

Qty.(ಮೆಟ್ರಿಕ್ .ಟನ್)

ರೂ .(ಲಕ್ಷಗಳಲ್ಲಿ )

10

ಖರೀದಿ

1)ಅಡಿಕೆ

2) ಕೋಕ

ಮಾರಾಟ      (ನೇರ ಖರೀದಿ ಸೇರಿ )

1) ಅಡಿಕೆ

2) ಕೋಕ

 

 

57209.64

2207.41 ಹಸಿ , 3170.84 ಒಣ

 

54767.30

-

 

 

1158888.03

-

 

159339.77

-

11

ಕಾಪರ್ ಸಲ್ಫೆಟ್

1)ಉತ್ಪಾದನೆ

2)ಮಾರಾಟ

 

159.50

142.17

 

240.85

232.89

12

ಚಾಕ್ಲೇಟ್

1)ಉತ್ಪಾದನೆ

2)ಮಾರಾಟ

14605.68

9968.50

------------

19308.96

13

ರಬ್ಬರ್

1)ಉತ್ಪಾದನೆ

2)ಮಾರಾಟ

2249.66

2247.72

2710.00

2764.45

14

ಕಾಳುಮೆಣಸು

1)ಉತ್ಪಾದನೆ

2)ಮಾರಾಟ

662.58

2371.31

2371.31

1837.039

Top

ಇತರೆ ಅಡಿಕೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಅವುಗಳೆಂದರೆ. :-

  • ತೋಟದ ಬೆಳೆಗಾರರ ಸಹಕಾರಿ ಮಾರಾಟ ಸಂಘ ಶಿರ್ಸಿ .

  • ಮಲೆನಾಡು ಅಡಿಕೆ ಮಾರಾಟ ಸಹಕಾರಿ ಸಂಘ ಶಿವಮೊಗ್ಗ.

  • ಅಡಿಕೆ ಸಂಸ್ಕರಣ ಮತ್ತ ಮಾರಾಟ ಸಹಕಾರ ಸಂಘ ಸಾಗರ. .

  • ತೋಟ ಉತ್ಪನ್ನಗಳ ಮಾರಾಟ ಸಹಕಾರಿ ಸಂಘ ನಿ., ಚನ್ನಗಿರಿ.

 

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿ., ಶಿವಮೊಗ್ಗ (ಮಾಮ್ ಕೋಸ್ )

ಮಾಮ್ಕೋಸ್ ಸೊಸೈಟಿಯು 1939ರಲ್ಲಿ ಸ್ಥಾಪನೆಗೊಂಡಿದ್ದು, ಇದು ಮೂರು ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ, ಅಂದರೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ದಾವಣಗೆರೆ ಜಿಲ್ಲೆಯ ಭಾಗಗಳಾದ ಚನ್ನಗಿರಿ ಮತ್ತು ಹೊನ್ನಾಲಿ ತಾಲ್ಲೂಕುಗಳನ್ನು ಒಳಗೊಂಡಿದೆ. ಇದು 25469 ಸದಸ್ಯರನ್ನು ಹೊಂದಿದ್ದು, ಸರ್ಕಾರದಿಂದ ಯಾವುದೇ ಷೇರಿನ ಮೊತ್ತವಿಲ್ಲದೆ ಒಟ್ಟು ರೂ.741.42 ಲಕ್ಷಗಳ ಪಾವತಿಸಿದ ಷೇರು ಬಂಡವಾಳ ಹಾಗೂ ರೂ.3528.13ಲಕ್ಷಗಳ ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. 31/03/2019 ರಂತ್ಯಕ್ಕೆ ಸಂಘವು ರೂ.306.30 ಲಕ್ಷದ ನಿವ್ವಳ ಲಾಭಗಳಿಸಿರುತ್ತದೆ. ಸಂಘವು 11 ಶಾಖೆಗಳನ್ನು ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.mamcos.info ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ www.mamcos.info

ಅಡಿಕೆ ಸಂಸ್ಕರಣ ಮತ್ತ ಮಾರಾಟ ಸಹಕಾರ ಸಂಘ ನಿ., (ಆಪಕೋಸ್ )

ಈ ಸಂಘವು 1973 ರಲ್ಲಿ ನೋಂದಣಿಯಾಗಿದ್ದು , ಇದರ ಕಾರ್ಯವ್ಯಾಪ್ತಿಯು ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಒಳಗೊಂಡಿದೆ . ಇದು 5811 ಸದಸ್ಯರನ್ನು ಮತ್ತು 42 ಸಂಘಗಳನ್ನು ಅದರ ಸದಸ್ಯರನ್ನಾಗಿ ಹೊಂದಿದೆ. 2018-19ರ ಅಂತ್ಯಕ್ಕೆ ಸಂಘವು ಪಾವತಿಸಿದ ಷೇರು ಬಂಡವಾಳ ರೂ.127.25 ಲಕ್ಷಗಳನ್ನು, ರೂ. 3528.13 ಲಕ್ಷಗಳ ದುಡಿಯುವ ಬಂಡವಾಳ ಹಾಗೂ ಒಟ್ಟು ವಹಿವಾಟು ರೂ .12769.70 ಲಕ್ಷಗಳನ್ನು ಹೊಂದಿರುತ್ತದೆ. ದಿನಾಂಕ:31-03-2019ರ ಅಂತ್ಯಕ್ಕೆ ಸೊಸೈಟಿಯು ರೂ .81.24 ಲಕ್ಷಗಳ ನಿವ್ವಳ ಲಾಭ ಗಳಿಸಿರುತ್ತದೆ.
Top